ಬರಿಯ ನುಡಿಯಲ್ಲವೋ ಕನ್ನಡ,
ಬೆರೆತಿದೆ ಇದು ನಮ್ಮೂಸಿರ ಸಂಗಡ.
ಪ್ರೀತಿ, ವಿಶ್ವಾಸವಿದು ಕನ್ನಡಿಗರ ಗುರುತು,
ವಿಶ್ವವೇ ಇಂದು ಮಾತಾಡುತ್ತಿದೆ ನಮ್ಮ ಕುರಿತು.
ಕನ್ನಡ ನೆಲವಿದು ಪರಮ ಪವಿತ್ರ ನಾಡು,
ಮೊಳಗಿಸು ದಿಗಂತದಲಿ ಶಾಂತಿಯ ಹಾಡು.
ನಾ ಕನ್ನಡಿಗನೆಂಬುದಕೆ ನಿನಗಿರಲಿ ಗರ್ವ
ನಾಡು, ನುಡಿಯ ಸೇವೆಯೇ ನಿತ್ಯಪರ್ವ..
ಕನ್ನಡ ರಾಜ್ಯೋತ್ಸವದ ಶುಭಾಶಯಗಳು