ನಾರಾಯಣಗೌಡ್ರು.ಟಿ.ಎ | ‌Narayanagowdru T.A. Profile Banner
ನಾರಾಯಣಗೌಡ್ರು.ಟಿ.ಎ | ‌Narayanagowdru T.A. Profile
ನಾರಾಯಣಗೌಡ್ರು.ಟಿ.ಎ | ‌Narayanagowdru T.A.

@narayanagowdru

13,866
Followers
1
Following
2,318
Media
3,152
Statuses

ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

Karnataka
Joined October 2010
Don't wanna be here? Send us removal request.
Pinned Tweet
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
9 months
ಕನ್ನಡಿಗರ ಮೇಲೆ ಹಿಂದಿ ನುಡಿಯನ್ನು ಹೇರುವುದು ಕ್ರೌರ್ಯ. ಇದು ಮೋಸದಿಂದ ಕನ್ನಡ ಜನಾಂಗದ ಮೇಲೆ ಹೂಡಲಾಗಿರುವ ಪರೋಕ್ಷ ಯುದ್ಧ. ದೇಶ ಯಾವತ್ತಿಗೂ ಒಂದಾಗಿರಬೇಕೆಂದು ಬಯಸುವುದಾದರೆ ಹಿಂದಿ ಹೇರಿಕೆಯನ್ನು ಕೂಡಲೇ ನಿಲ್ಲಿಸಬೇಕು. ಹಿಂದಿಹೇರಿಕೆ ದೇಶದ ಐಕ್ಯತೆಗೆ ಮಾರಕ #StopHindiImposition #ಹಿಂದಿಹೇರಿಕೆನಿಲ್ಲಿಸಿ
35
131
326
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
1 year
ಕರ್ನಾಟಕ ಸರ್ಕಾರದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಿ.ಜಡ್.ಜಮೀರ್ ಅಹ್ಮದ್ ಖಾನ್ ಅವರು ಇನ್ನೂ ಕನ್ನಡ ಕಲಿಯದಿರುವುದು ನಾಚಿಕೆಗೇಡು. ಎಲ್ಲ ಸಚಿವರೂ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ಜಮೀರ್ ಅಹಮದ್ ಅವರು ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಕಾರಣಕ್ಕೆ ಬಂದು ಇಷ್ಟು ವರ್ಷಗಳಾದರೂ ಕನ್ನಡ ಕಲಿಯದಿರುವುದು ಎಷ್ಟು ಸರಿ?
125
335
1K
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
1 year
2005ರಲ್ಲಿ @BZZameerAhmedK ಜಮೀರ್ ಅಹಮದ್ ಖಾನ್ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿದ್ದರು. ಆಗ ಅವರು ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ವಿಧಾನಸಭೆ ಕಲಾಪ ನಡೆಯುವಾಗ ಕರವೇ ಕಾರ್ಯಕರ್ತರು ಅಲ್ಲೇ ಕರಪತ್ರ ಎಸೆದು ಪ್ರತಿಭಟಿಸಿದಾಗ ನನ್ನಿಂದ ತಪ್ಪಾಗಿದೆ ಎಂದಿದ್ದರು. 18 ವರ್ಷ ಕಳೆದರೂ ಅವರು ಕನ್ನಡ ಕಲಿತಿಲ್ಲವೇ?
Tweet media one
92
392
1K
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
5 months
ಕನ್ನಡದಲ್ಲಿ ನಾಮಫಲಕ ಹಾಕಿ ಎಂದು ಮನವಿ ಪತ್ರ ನೀಡಿದ್ದಕ್ಕೆ ನನ್ನ ಮೇಲೆ, ನನ್ನ ಸಂಘಟನೆಯ ಮುಖಂಡರ ಮೇಲೆ ಮಾಲ್ ಒಂದರ ಮಾಲೀಕ ದೂರು ದಾಖಲಿಸಿದ್ದಾನೆ. ದುಡ್ಡಿನ ದುರಹಂಕಾರ ಇವರನ್ನು ಎಲ್ಲಿಗೆ ತಂದು ನಿಲ್ಲಿಸಿದೆ ನೋಡಿ. ಈ ದುರಹಂಕಾರಿಗಳಿಗೆ ಯಾವ ಭಾಷೆಯಲ್ಲಿ ಉತ್ತರ ಕೊಡಬೇಕೋ ಅದನ್ನು ಕೊಡುತ್ತೇವೆ. #ಕನ್ನಡದಲ್ಲಿನಾಮಫಲಕ
120
223
1K
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
5 months
ರಾಜ್ಯ ಸರ್ಕಾರ ಫೆ.28ರೊಳಗೆ ನಾಮಫಲಕಗಳನ್ನು ಕನ್ನಡೀಕರಿಸಲು ಆದೇಶಿಸಿದೆ. ಹೀಗಾಗಿ ನಾವು ಫೆ.28ರವರೆಗೆ ಕಾಯುತ್ತೇವೆ. ಆಗಲೂ ಈ ನೆಲದ ಕಾನೂನಿಗೆ, ಈ ನೆಲದ ಭಾಷೆಗೆ ಗೌರವ ನೀಡದವರ ವಿರುದ್ಧ ನಾವು ಇನ್ನೂ ದೊಡ್ಡ ಪ್ರಮಾಣದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ. (5/8)
72
169
1K
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
5 months
ಹದಿನೈದು ದಿನಗಳ ಸೆರೆವಾಸದಿಂದ ಹೊರಗೆ ಬಂದಿದ್ದೇನೆ. ಇದು ನನಗೆ ಹೊಸದಲ್ಲ. ಕನ್ನಡಕ್ಕಾಗಿ, ಕನ್ನಡಿಗರಿಗಾಗಿ, ಕನ್ನಡತನಕ್ಕಾಗಿ ಎಷ್ಟೋ ಬಾರಿ ಜೈಲಿಗೆ ಹೋಗಿದ್ದೇನೆ. ಮೊಕದ್ದಮೆಗಳು, ಸೆರೆವಾಸ ಇದೆಲ್ಲವೂ ಒಬ್ಬ ಚಳವಳಿಗಾರನ ಬದುಕಲ್ಲಿ ಅನಿವಾರ್ಯ. (1/5)
51
157
1K
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
1 year
ಇ-ಕಾಮರ್ಸ್ ಅಡಿಯಲ್ಲಿ ಅಮೂಲ್ ಹಾಲು, ಮೊಸರು ಮಾರಾಟಕ್ಕೆ ಮುಂದಾದರೆ ಅಂಥ ಸಂಸ್ಥೆಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟ ನಡೆಸಲಿದೆ. ಈ ಸಂಸ್ಥೆಗಳು ಅಮೂಲ್ ಮಾರಾಟ ನಿಲ್ಲಿಸಬೇಕು, ಇಲ್ಲವಾದಲ್ಲಿ ಆಗುವ ಅನಾಹುತಕ್ಕೆ ಆ ಸಂಸ್ಥೆಗಳೇ ಜವಾಬ್ದಾರಿಯಾಗುತ್ತವೆ. (1/7) #SaveNandini
Tweet media one
186
223
923
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ನಾಡ ಬಾವುಟ ಸುಟ್ಟ ಮತ್ತು ರಾಯಣ್ಣನವರ ಪ್ರತಿಮೆಯನ್ನು ಧ್ವಂಸ ಮಾಡಿದ ಭಯೋತ್ಪಾದಕ ಸಂಘಟನೆಗಳಾದ ಎಂಇಎಸ್ ಮತ್ತು ಶಿವಸೇನೆಯನ್ನು ಕರ್ನಾಟಕದಲ್ಲಿ ನಿರ್ಬಂಧಿಸಲು ಒತ್ತಾಯಿಸಿ ಇಂದು ಸಂಜೆ 7 ಗಂಟೆಗೆ ಟ್ವಿಟರ್ ಅಭಿಯಾನ ಹಮ್ಮಿಕೊಂಡಿದ್ದೇವೆ. ಸ್ವಾಭಿಮಾನಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ವಿನಂತಿ. #BanMES #BanShivasene
Tweet media one
22
303
860
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
4 years
ಶಾಸಕ‌ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಎರಡೇ ಎರಡು ಸವಾಲು. ಅವರು‌ ನಿಜವಾಗಿಯೂ ಜನನಾಯಕರಾಗಿದ್ದರೆ ಈ ಎರಡು ಸವಾಲು ಸ್ವೀಕರಿಸಲಿ.
Tweet media one
Tweet media two
Tweet media three
42
217
812
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
5 months
ಇವತ್ತಿನ‌ ಚಳವಳಿಯ ಸಂದರ್ಭದಲ್ಲಿ ಬೆಂಗಳೂರಿನ ನಾಗರಿಕರಿಗೆ ಆಗಿರಬಹುದಾದ ಸಣ್ಣಪುಟ್ಟ ತೊಂದರೆಗಳಿಗೆ ನಮಗೆ ಬೇಸರವಿದೆ. ಆದರೆ ಬೆಂಗಳೂರಿನಲ್ಲಿ ಕನ್ನಡವನ್ನು, ಕನ್ನಡಿಗರನ್ನು ಉಳಿಸಿಕೊಳ್ಳಲು ಇಂಥ ದೊಡ್ಡ ಪ್ರಮಾಣದ ಚಳವಳಿ ಅಗತ್ಯವಿತ್ತು ಎಂಬುದನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ. (6/8)
64
124
833
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
"ಕರವೇಯಲ್ಲಿ ಸಾಬರು ಇದ್ದಾರೆ" ಎಂದು ಹೇಳಿದ್ದಾರೆ ಯತ್ನಾಳ್. ಕರವೇಯಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧರಾದಿಯಾಗಿ ಎಲ್ಲ ಧರ್ಮದವರೂ ಇದ್ದಾರೆ. ಭಾರತ ಸಂವಿಧಾನದ 14 ನೇ ವಿಧಿ, ಎಲ್ಲ ಭಾರತೀಯರೂ ಸಮಾನರೆಂದು ಹೇಳುತ್ತದೆ. ಕರವೇಯಲ್ಲಿ ಎಲ್ಲ ಧರ್ಮದವರೂ ಕನ್ನಡಸೇವೆಯಲ್ಲಿ ತೊಡಗಿದ್ದಾರೆ, ಅದಕ್ಕಾಗಿ ಹೆಮ್ಮೆಪಡುತ್ತೇವೆ. (4/9)
15
125
781
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
5 months
ಕರ್ನಾಟಕ ರಕ್ಷಣಾ ವೇದಿಕೆ ಇಂದು ಬೆಂಗಳೂರು ಮಹಾನಗರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ನಾಮಫಲಕ ಜಾಗೃತಿ ಆಂದೋಲನ ಅಭೂತಪೂರ್ವ ಯಶಸ್ಸು ಕಂಡಿದೆ. ಇದಕ್ಕಾಗಿ ನನ್ನೆಲ್ಲ ಸಮರ ಸೇನಾನಿ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ (1/8)
45
112
729
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
4 months
ನಾಮಫಲಕಗಳಲ್ಲಿ ಕನ್ನಡ ಕಡ್ಡಾಯದ ಸುಗ್ರೀವಾಜ್ಞೆಗೆ ಸಹಿ ಹಾಕದೆ ಹಿಂದಿರುಗಿಸಿರುವ ಮಾನ್ಯ ರಾಜ್ಯಪಾಲರ ನಡೆ ಸರಿಯಲ್ಲ. ಅವರು ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸಿ, ಕೋಟ್ಯಂತರ ಕನ್ನಡಿಗರ ಭಾವನೆಗಳನ್ನು ಗೌರವಿಸಿ ಸುಗ್ರೀವಾಜ್ಞೆಗೆ ಸಹಿ ಹಾಕಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸುತ್ತದೆ.
34
192
738
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸುವ ಪ್ರಕರಣದಲ್ಲಿ‌ ಎಂಇಎಸ್, ಶಿವಸೇನೆ ಅಲ್ಲದೆ ಇನ್ನೂ ಕೆಲವು ಸಮಾಜಘಾತಕ ಸಂಘಟನೆಗಳು ಭಾಗವಹಿಸಿರುವ ಬಗ್ಗೆ ಮಾಹಿತಿಗಳಿವೆ. ಇಂಥ ದುಷ್ಟರನ್ನು ಕನ್ನಡಿಗರು ದೂರವಿಡಬೇಕು. #BanMES #BanShivasene
18
290
639
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
1 year
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಜಗದ ಕವಿ, ಯುಗದ ಕವಿ, ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಇಡಲು ತೀರ್ಮಾನಿಸಿರುವುದು ಅತ್ಯುತ್ತಮ ನಿರ್ಧಾರ. ಈ ವಿಷಯದಲ್ಲಿ ಆಸಕ್ತಿ ವಹಿಸಿ ಕುವೆಂಪು ಅವರ ಹೆಸರನ್ನೇ ಇಡುವುದಾಗಿ ಘೋಷಿಸಿದ ಮಾಜಿ ಮುಖ್ಯಮಂತ್ರಿ‌ಗಳಾದ @BSYBJP ಬಿ.ಎಸ್.ಯಡಿಯೂರಪ್ಪನವರಿಗೆ ಧನ್ಯವಾದಗಳು.
Tweet media one
10
71
643
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
21 ಕೋಟಿ ಜನಸಂಖ್ಯೆಯ ಉತ್ತರಪ್ರದೇಶ ರಾಜ್ಯದಲ್ಲಿ 6.5 ಕೋಟಿ ಜನಸಂಖ್ಯೆಯ ಕರ್ನಾಟಕದಲ್ಲಿ ಇರುವಷ್ಟು ಮೆಡಿಕಲ್ ಕಾಲೇಜುಗಳು ಇಲ್ಲ! ನೀಟ್ ಜಾರಿಗೆ ಬಂದಿದ್ದು ಈ ಕಾರಣಕ್ಕೆ. ಕರ್ನಾಟಕದ ಕಾಲೇಜುಗಳಲ್ಲಿ ಉತ್ತರ ಭಾರತೀಯರನ್ನು ತುಂಬುವ ಯೋಜನೆಯೇ ನೀಟ್. ಮತ್ತೇನೂ ಅಲ್ಲ. #BanNeet #RIPNaveen
17
248
617
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
4 years
ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಹೊರತುಪಡಿಸಿ ಇತರ ಸಚಿವರು ಜಿಲ್ಲಾಕೇಂದ್ರಗಳಲ್ಲಿ ಕನ್ನಡ ಧ್ವಜಾರೋಹಣ ನಡೆಸಿಲ್ಲ. ಇದು ಅಕ್ಷಮ್ಯ ಕನ್ನಡ ದ್ರೋಹ ಮತ್ತು ಗುಲಾಮಗಿರಿಯ ಸಂಕೇತ. ಇದನ್ನು ಕರವೇ ಸಹಿಸುವುದಿಲ್ಲ. ಕನ್ನಡ ಧ್ವಜಾರೋಹಣ ಮಾಡದ ಸಚಿವರ ವಿರುದ್ಧ ಜಿಲ್ಲಾ ಕೇಂದ್ರಗಳಲ್ಲಿ ನಾಳೆ ಕರವೇ ಕಾರ್ಯಕರ್ತರು ಪ್ರತಿಭಟಿಸಲಿದ್ದಾರೆ.
Tweet media one
28
125
604
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಕರ್ನಾಟಕದಲ್ಲಿ ಕನ್ನಡ ಸಿನೆಮಾಗಳಿಗೆ ಸಂಪೂರ್ಣ ಪ್ರಾಮುಖ್ಯತೆ ಸಿಗಬೇಕೆನ್ನುವುದು ಕರವೇಯ ಆಶಯವಾಗಿದೆ. ಒಂದು ವೇಳೆ ಪರಭಾಷೆಯ ಚಿತ್ರಗಳು ಬಿಡುಗಡೆ ಮಾಡಬೇಕಾದ ಪರಿಸ್ಥಿತಿ ಬಂದರೆ ಕನ್ನಡಕ್ಕೆ ಡಬ್ ಆಗಿರುವ ಅವತರಣಿಕೆಗೆ ಪ್ರಾಮುಖ್ಯತೆ ಸಿಗಬೇಕು. ಮನೊರಂಜನೆಯ ಮೂಲಕ ಕನ್ನಡಿಗರ ಮೇಲೆ ಪರಭಾಷೆಯ ಹೇರಿಕೆಯನ್ನು ಕರವೇ ಕಟುವಾಗಿ ವಿರೋಧಿಸುತ್ತದೆ.
13
179
610
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಭಯೋತ್ಪಾದಕ ಸಂಘಟನೆಗಳಾದ ಶಿವಸೇನೆ ಮತ್ತು ಎಂಇಎಸ್ ನಿಷೇಧಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಸಹಸ್ರಾರು ಕಾರ್ಯಕರ್ತರು ಬೆಳಗಾವಿಯ ಸುವರ್ಣಸೌಧಕ್ಕೆ ಸೋಮವಾರ ಬೆಳಗ್ಗೆ 12ಗಂಟೆಗೆ ಮುತ್ತಿಗೆ ಹಾಕಲಿದ್ದಾರೆ‌. ಅಂದು ಕಿತ್ತೂರುರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆ ನಡೆಸಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು.
8
200
576
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
5 months
ಡಿಸೆಂಬರ್ 27ರಂದು ಕರ್ನಾಟಕ ರಕ್ಷಣಾ ವೇದಿಕೆ ನಾಡಪ್ರಭು ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯ ಸಾದಹಳ್ಳಿ ಗೇಟ್ ಬಳಿಯಿಂದ ದೊಡ್ಡ ಮೆರವಣಿಗೆ ಇಟ್ಟುಕೊಂಡಿದೆ. ಅಂದು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ತೆರಳಲಿದೆ. #ಕನ್ನಡದಲ್ಲಿನಾಮಫಲಕ ಇಲ್ಲದಿದ್ದರೆ ಆಗುವ ಅನಾಹುತಗಳಿಗೆ ನಾವು ಜವಾಬ್ದಾರರಲ್ಲ. ಇದು ನನ್ನ ಅಂತಿಮ ಎಚ್ಚರಿಕೆ.
54
166
579
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
4 years
21 ಕೋಟಿ ಜನಸಂಖ್ಯೆಯ ಒಂದು ರಾಜ್ಯ ನವೆಂಬರ್ ನಲ್ಲಿ ಸಂಗ್ರಹಿಸಿದ ಜಿಎಸ್ ಟಿ 5528 ಕೋಟಿ ರುಪಾಯಿ! ಇದೇ ತಿಂಗಳಲ್ಲಿ ಕರ್ನಾಟಕ ಸಂಗ್ರಹಿಸಿರುವ ಜಿಎಸ್ ಟಿ 6915 ಕೋಟಿ ರುಪಾಯಿ. ಅನುದಾನಗಳ ಹಂಚಿಕೆಯಲ್ಲಿ ಜನಸಂಖ್ಯೆಯೂ ಒಂದು ಮುಖ್ಯವಾದ ಮಾನದಂಡ. ಅಲ್ಲಿಗೆ ಕರ್ನಾಟಕದ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಅರ್ಥವಾಯಿತಾ? (2/2)
15
113
565
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
ಹಿಂದಿ ಸಾಮ್ರಾಜ್ಯಶಾಹಿಯಿಂದಾಗಿ ಮುಂದೊಂದು ದಿನ ಕನ್ನಡವನ್ನು ಬಳಸುವುದೇ ಅಪರಾಧ ಎನ್ನುವಂತಾದರೆ ಆಶ್ಚರ್ಯವಿಲ್ಲ. ಈ ನಿಟ್ಟಿನಲ್ಲಿ ನಾಡಿನ ಎಲ್ಲರನ್ನೂ ಎಚ್ಚರಿಸಲು ಇಂದು ಸಂಜೆ 5 ಗಂಟೆಗೆ ಟ್ವಿಟರ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. #ಹಿಂದಿಗುಲಾಮಗಿರಿಬೇಡ #No ‌ToHindiSlavery ಹ್ಯಾಶ್ ಟ್ಯಾಗ್ ಗಳೊಂದಿಗೆ ಈ ಟ್ವಿಟರ್ ಅಭಿಯಾನದಲ್ಲಿ ಭಾಗವಹಿಸಿ.
23
198
547
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
5 months
ನಾನು ಯಾವ ಭಾಷೆಯ ವಿರೋಧಿಯಲ್ಲ. ಯಾವ ಭಾಷಿಕರ ವಿರೋಧಿಯೂ ಅಲ್ಲ. ಆದರೆ ಪದೇ ಪದೇ ಕನ್ನಡಕ್ಕೆ, ಕನ್ನಡಿಗರಿಗೆ ಅಪಮಾನ ಆಗುವುದನ್ನು ಸಹಿಸುವುದಿಲ್ಲ. #ಕನ್ನಡದಲ್ಲಿನಾಮಫಲಕ ಹಾಕದವರು ಕನ್ನಡದ್ರೋಹಿಗಳು, ನಾಡದ್ರೋಹಿಗಳು. ಅವರಿಗೆ ಈ ನಾಡಿನಲ್ಲಿ ಇರುವ ಯೋಗ್ಯತೆ ಇಲ್ಲ. ಇಂಥವರ ವಿರುದ್ಧ ನಮ್ಮ ಹೋರಾಟವೇ ಹೊರತು, ಯಾವುದೇ ಭಾಷೆ,ಭಾಷಿಕರ ವಿರುದ್ಧವಲ್ಲ
31
139
556
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
5 months
ಕನ್ನಡ ನಾಮಫಲಕ‌ ಜಾಗೃತಿ ಆಂದೋಲನವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವಿಸ್ತರಿಸಲು‌ ನಿರ್ಧರಿಸಿದ್ದು, ಎಲ್ಲ ಜಿಲ್ಲಾ, ತಾಲ್ಲೂಕು ಕೇಂದ್ರಗಳಿಗೆ ದೊಡ್ಡ ಮಟ್ಟದ 'ಕನ್ನಡ ಯಾತ್ರೆ'ಯನ್ನು ನಡೆಸಲಿದ್ದೇನೆ. ರಾಜ್ಯದ ಪ್ರತಿಯೊಂದು ನಾಮಫಲಕವೂ ಕನ್ನಡೀಕರಣಗೊಳ್ಳುವವರೆಗೆ ನಮ್ಮ ಆಂದೋಲನ ಮುಂದುವರೆಯಲಿದೆ. (8/8)
59
96
554
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
ಹಿಂದಿಹೇರಿಕೆ ವಿರೋಧಿಸಿ ನಿನ್ನೆ ಕರ್ನಾಟಕದ ಎಲ್ಲೆಡೆ ನಡೆದ ಸಾವಿರಾರು ಪ್ರತಿಭಟನೆಗಳಲ್ಲಿ ಪಾಲ್ಗೊಂಡ ನನ್ನೆಲ್ಲ ಕರವೇ ಸಂಗಾತಿಗಳಿಗೆ, ಕನ್ನಡದ ಕಟ್ಟಾಳುಗಳಿಗೆ, #StopHindiImposition #ಹಿಂದಿಹೇರಿಕೆನಿಲ್ಲಿಸಿ ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲ ಕನ್ನಡದ ಮನಸುಗಳಿಗೆ, ಗಣ್ಯರಿಗೆ, ಮಾಧ್ಯಮದ ಬಂಧುಗಳಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಕೃತಜ್ಞತೆಗಳು
18
131
534
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
No Time To Die ಎಂಬ ಹಾಲಿವುಡ್ ಸಿನಿಮಾದ ಕನ್ನಡ ಅವತರಣಿಕೆಯನ್ನು ಇಂದು ಬೆಂಗಳೂರಿನ ನವರಂಗ್ ಚಿತ್ರಮಂದಿರದಲ್ಲಿ ವೀಕ್ಷಿಸಿದೆ. ಚಿತ್ರ ಅತ್ಯುತ್ತಮ ಗುಣಮಟ್ಟದೊಂದಿಗೆ ಕನ್ನಡೀಕರಣಗೊಂಡಿದೆ. ಪರಭಾಷಾ ಸಿನಿಮಾಗಳು ಕನ್ನಡದಲ್ಲೇ ತೆರೆಕಂಡಲ್ಲಿ ಸಾಮಾನ್ಯ ಕನ್ನಡಿಗರೂ ನೋಡಿ ಅರ್ಥ ಮಾಡಿಕೊಳ್ಳಬಹುದು. #NoTimeToDieInKannada
Tweet media one
Tweet media two
Tweet media three
Tweet media four
11
89
528
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
ಸಮಸ್ತ ಕನ್ನಡಿಗರು, ವಿವಿಧ ಕ್ಷೇತ್ರಗಳ ಗಣ್ಯರು ಸೆಪ್ಟೆಂಬರ್ 14 ರಂದು ಟ್ವಿಟರ್, ಫೇಸ್ ಬುಕ್, ಇನ್ಸ್ಟಾ ಗ್ರಾಂ, ವಾಟ್ಸಾಪ್, ಕ್ಲಬ್ ಹೌಸ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿ ದಿವಸ ಆಚರಣೆ ವಿರುದ್ಧ ಧ್ವನಿ ಎತ್ತಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಮನವಿ ಮಾಡುತ್ತದೆ. ( 7/7)
11
122
537
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
4 years
ಯಾವುದೋ ಒಂದು ಪಕ್ಷ ಪಾಕಿಸ್ತಾನದ, ಚೀನಾದ ಗುಮ್ಮ ತೋರಿಸಿ, ರಾಷ್ಟ್ರೀಯತೆಯ ಹೆಸರಿನಲ್ಲಿ ಕೇಂದ್ರದ ಜತೆಗೆ ಒಕ್ಕೂಟ ರಾಜ್ಯಗಳ ಚುನಾವಣೆಯನ್ನೂ ಗೆದ್ದರೆ, ಪ್ರಾದೇಶಿಕ ಮಹತ್ವದ ಚುನಾವಣಾ ವಿಷಯಗಳು ತೆರೆಮರೆಗೆ ಸರಿಯುತ್ತವೆ. ಇದರಿಂದಾಗಿ ರಾಜ್ಯ ಸರ್ಕಾರಗಳು ಇನ್ನಷ್ಟು ದುರ್ಬಲಗೊಂಡು ಒಕ್ಕೂಟ ಸರ್ಕಾರದ ಅಡಿಯಾಳಾಗುತ್ತವೆ. ಇದು ಅಪಾಯಕಾರಿ. (2/3)
15
99
521
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಪಠ್ಯಪುಸ್ತಕ ಪುನರ್ ಪರಿಶೀಲನಾ ಸಮಿತಿಯನ್ನು ವಿಸರ್ಜಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು @BSBommai ಹೇಳಿಕೆ ನೀಡಿರುವುದು ಸ್ವಾಗತಾರ್ಹ. ಕೂಡಲೇ ಪರಿಷ್ಕೃತ ಪಠ್ಯವನ್ನು ಸಂಪೂರ್ಣ ಹಿಂದಕ್ಕೆ ಪಡೆದು ಹಳೆಯ ಪಠ್ಯವನ್ನೇ ಮುಂದುವರೆಸಬೇಕು, ನಾಡಗೀತೆ, ಕುವೆಂಪು, ನಾಡಧ್ವಜಕ್ಕೆ ಅಪಮಾನ ಎಸಗಿದ ಚಕ್ರತೀರ್ಥನನ್ನು ಬಂಧಿಸಬೇಕು.
60
114
524
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ನಾನು ಎಡ, ಬಲ ಯಾವ ಪಂಥಕ್ಕೂ ಸೇರಿದವನಲ್ಲ. ನಾನು ರಾಷ್ಟ್ರಕವಿ ಕುವೆಂಪು ಅವರು ಹೇಳಿದ ಮನುಷ್ಯಪಂಥಕ್ಕೆ ಸೇರಿದವನು. ಪಠ್ಯಪುಸ್ತಕ ಬದಲಾವಣೆ ಹೆಸರಿನಲ್ಲಿ ಆಗುತ್ತಿರುವ ಅಪಾಯಕಾರಿ ಬೆಳವಣಿಗೆಗಳು ನನಗೆ ಗೊತ್ತಿದೆ. ಕನ್ನಡ ಸಾಹಿತಿಗಳ ಬೆನ್ನಿಗೆ ನಾವು ನಿಲ್ಲುತ್ತೇವೆ. @BSBommai @BCNagesh_bjp #DismissLyingMinister #BCNageshExposed
71
117
533
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
5 months
ಒಂದಾದ ಮೇಲೊಂದರಂತೆ ಪೊಲೀಸ್ ಕೇಸ್ ಗಳು, ಜೈಲುವಾಸ ಎಲ್ಲದರ ನಡುವೆಯೂ ನನಗೆ ಅತ್ಯಂತ ಸಮಾಧಾನ ತಂದಿರುವುದು ನಮ್ಮ ಹೋರಾಟ ತಾರ್ಕಿಕ ಗುರಿಯತ್ತ ಸಾಗಿರುವ ಬೆಳವಣಿಗೆ. ರಾಜ್ಯ ಸರ್ಕಾರ ಈಗಾಗಲೇ ಕನ್ನಡ ನಾಮಫಲಕ ಕಡ್ಡಾಯದ ಸುಗ್ರೀವಾಜ್ಞೆ ಹೊರಡಿಸಿದೆ. ನಮ್ಮ ಚಳವಳಿ ಯಶಸ್ವಿಯಾಗಿರುವುದಕ್ಕೆ ಇದು ಸಾಕ್ಷಿ. (3/5)
15
79
531
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
4 years
ಕನ್ನಡ ಧ್ವಜಾರೋಹಣ ಮಾಡದ ಕರ್ನಾಟಕ‌ ಸರ್ಕಾರದ ಮಂತ್ರಿಗಳಿಗೆ ಧಿಕ್ಕಾರ. ಕನ್ನಡವೆಂಬುದು ನಮ್ಮ ಗುರುತು,ನಮ್ಮ ಜೀವ, ನಮ್ಮ ಉಸಿರು,ನಮ್ಮ ಬದುಕು. ಕನ್ನಡ ಬೇಡ‌ ಎನ್ನುವವರು ಕರ್ನಾಟಕಕ್ಕೂ ಬೇಡ. ಕನ್ನಡ ಧ್ವಜಕ್ಕೆ ಅಪಮಾನಿಸಿದವರು ಕನ್ನಡ ದ್ರೋಹಿಗಳು. ಈ ಪ್ರಮಾದಕ್ಕೆ ಕಾರಣರಾದ ಸರ್ಕಾರದ‌ ಮುಖ್ಯ ಕಾರ್ಯದರ್ಶಿ ವಜಾಗೊಳಿಸಿ. #ನಮ್ಮಧ್ವಜ_ನಮ್ಮಹೆಮ್ಮೆ
Tweet media one
9
149
497
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
4 years
ಇಂದು ಬೆಳಗಾವಿ ಜಿಲ್ಲೆಯ ಪೀರಣವಾಡಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸ್ಥಾಪಿಸಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದೆ. ಜೈ ರಾಯಣ್ಣ, ಜೈ ಚೆನ್ನಮ್ಮ.
Tweet media one
Tweet media two
Tweet media three
9
62
490
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
ಹಿಂದಿ ದಿವಸ ಎಂಬುದು ದೇಶದ ಹಿಂದಿಯೇತರ ಜನರ ಮೇಲೆ ನಡೆಸುವ ದೌರ್ಜನ್ಯ, ಭಾಷಾ ಸಮುದಾಯಗಳನ್ನು ವಂಚಿಸುವ ಹುನ್ನಾರ. ನಮ್ಮ ತೆರಿಗೆ ಹಣದಲ್ಲಿ ನಮ್ಮ ಮೇಲೇ ಒಂದು ಭಾಷೆಯನ್ನು ಹೇರುವ ಕುಟಿಲತಂತ್ರ. ನಮ್ಮ ಕೈಗೇ ಕತ್ತರಿ ಕೊಟ್ಟು ನಮ್ಮ ನರಗಳನ್ನೇ ಕತ್ತರಿಸುವ ಹೀನ ಆಚರಣೆ. ಇದನ್ನು ಧಿಕ್ಕರಿಸೋಣ. #StopHindiImposition #ಹಿಂದಿಹೇರಿಕೆನಿಲ್ಲಿಸಿ
10
207
494
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
ಬೆಳಗಾವಿ ಕನ್ನಡ ನಾಡಿನ ಅವಿಭಾಜ್ಯ ಅಂಗ. ಬೆಳಗಾವಿ ಮಹಾನಗರ ಪಾಲಿಕೆಯ ಎದುರು ಕನ್ನಡ ಬಾವುಟ ನಿರಂತರವಾಗಿ ಹಾರಲು ಬೇಕಾದ ಎಲ್ಲಾ ರೀತಿಯ ಕ್ರಮಗಳನ್ನೂ ಕರ್ನಾಟಕ ಸರಕಾರ ತೆಗೆದುಕೊಳ್ಳಬೇಕು. ಕನ್ನಡಿಗರ ಸ್ವಾಭಿಮಾನವನ್ನು ಪದೇಪದೇ ಕೆಣಕಬೇಡಿ. #ನಮ್ಮಬೆಳಗಾವಿನಮ್ಮಬಾವುಟ
7
205
484
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟಗಳನ್ನು ಸುಡುವ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿದ್ದು, ಇದಕ್ಕೆ ಸರಿಯಾದ ಸಂದರ್ಭದಲ್ಲಿ ಸರಿಯಾದ ಉತ್ತರವನ್ನು ನೀಡುತ್ತೇವೆ. ಬಾವುಟ ಸುಟ್ಟ ಹೇಡಿಗಳು ಸಮಾಜಘಾತಕರು. ಶಿವಸೇನೆ ಎಂಬುದೊಂದು ಭಯೋತ್ಪಾದಕ ಸಂಘಟನೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. (೪/೪)
9
129
490
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ದೇವನೂರು ಮಹದೇವ, ಬರಗೂರು ರಾಮಚಂದ್ರಪ್ಪ ಸೇರಿದಂತೆ ಕನ್ನಡದ ಹಿರಿಯ ಸಾಹಿತಿಗಳು ಕನ್ನಡದ ಆಸ್ತಿ, ಕನ್ನಡತನದ ಪ್ರತೀಕ, ಕನ್ನಡಿಗರ ಹೆಮ್ಮೆ. ಅವರಿಗೆ ಅಪಚಾರ, ಅಪಮಾನ ಎಸಗುವ ಯಾವ ಕೆಲಸವನ್ನೂ ಯಾರೂ ಮಾಡಬಾರದು. ಕರ್ನಾಟಕ ರಕ್ಷಣಾ‌ ವೇದಿಕೆ ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. (8/8)
30
117
488
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
5 months
ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ಆಗಿದ್ದೇ ಆಯಾ ಭಾಗದ ನುಡಿಪರಂಪರೆಯನ್ನು ರಕ್ಷಿಸಲು, ಗೌರವಿಸಲು. ಆದರೆ ಕರ್ನಾಟಕದಲ್ಲಿ ಮಾತ್ರ ಕನ್ನಡಕ್ಕೆ ಅಗೌರವ. ಇದನ್ನು ಹೇಗೆ ಸಹಿಸುವುದು, ಯಾಕಾಗಿ ಸಹಿಸುವುದು? ನಾವು ಹಿಂದಿ ರಾಜ್ಯಗಳಲ್ಲಿ ಕನ್ನಡ ನಾಮಫಲಕ ಕೇಳುತ್ತಿದ್ದೇವೆಯೇ? ನಮ್ಮ ನಾಡಿನಲ್ಲೇ ನಮ್ಮ ನುಡಿ ಸೊರಗಬೇಕೇ? #ಕನ್ನಡದಲ್ಲಿನಾಮಫಲಕ
23
144
497
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
ಒಂದು ದೇಶ ಒಂದು ಚುನಾವಣೆ ಎಂಬುದು ರಾಜ್ಯಗಳ ಅಸ್ತಿತ್ವವನ್ನು ಸಡಿಲಗೊಳಿಸ���ವ ಸ್ಪಷ್ಟ ಹುನ್ನಾರ.‌ ಪಾಕಿಸ್ತಾನ, ಚೀನಾ, ಹಿಂದೂ-ಮುಸ್ಲಿಂ, ಮಂದಿರ-ಮಸೀದಿಗಳ ಗುಮ್ಮ ತೋರಿಸಿ ರಾಜ್ಯಗಳ ಸಮಸ್ಯೆ, ಸವಾಲುಗಳನ್ನು ನಗಣ್ಯಗೊಳಿಸುವ ಸಂಚು. ಇದು ಯಾವುದೇ ಕಾರಣಕ್ಕೂ ಜಾರಿಯಾಗಬಾರದು. ಒಕ್ಕೂಟ ವ್ಯವಸ್ಥೆ ನಾಶವಾಗಲು ಬಿಡಬಾರದು #OneNationOneElection
14
135
476
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಖಾನಾಪುರದ ಹಲಸಿ ಹಿಂದೊಮ್ಮೆ ಕನ್ನಡಿಗರ ಬೃಹತ್ ಕದಂಬ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಅಂತಹ ಕನ್ನಡಿಗರ ಪವಿತ್ರ ಭೂಮಿಯಲ್ಲಿ ವಿಶ್ವಗುರು ಬಸವಣ್ಣನವರಿಗಾದ ಅವಮಾನ ಸಹಿಸಲಸಾಧ್ಯ. ಮಹಾನ್ ಮಾನವತಾವಾದಿಗೆ ಅವಮಾನ ಮಾಡಿದ ನೀಚರಿಗೆ ಎಂತಹ ಘೋರ ಶಿಕ್ಷೆ ನೀಡಿದರೂ ಕಡಿಮೆಯೆ. ಸರ್ಕಾರ ಇವರನ್ನು ಶಿಕ್ಷಿಸದಿದ್ದರೆ, ಜನರೇ ಶಿಕ್ಷಿಸುವ ಕಾಲ ಬಂದಿದೆ.
11
123
479
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಭಾಷಾಭಿಮಾನ ರಾಷ್ಟ್ರೀಯತೆ ಶತ್ರು ಎಂದು ಹೇಳುವ ಪಠ್ಯವನ್ನು ಕನ್ನಡಿಗರು ಯಾಕೆ, ಹೇಗೆ ಸಹಿಸಿಕೊಳ್ಳಬೇಕು? ಮ.ರಾಮಮೂರ್ತಿ, ಅ.ನ.ಕೃಷ್ಣರಾಯರು, ಡಾ.ರಾಜಕುಮಾರ್ ಸೇರಿದಂತೆ ಕನ್ನಡ ಚಳವಳಿ ಕಟ್ಟಿಬೆಳೆಸಿದ ಸಾವಿರಾರು ಮಹಾನಾಯಕರಿಗೆ ಮಾಡಿದ ಅವಮಾನವಿದು. @BSBommai @BCNagesh_bjp #DismissLyingMinister #BCNageshExposed
52
162
483
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಕರ್ನಾಟಕದಲ್ಲಿ ಭಾಗವಹಿಸಿರುವ ಕಾರ್ಯಕ್ರಮದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಿರುವುದನ್ನು ಕನ್ನಡಿಗರೆಲ್ಲರೂ ಒಟ್ಟಾಗಿ ವಿರೋಧಿಸಬೇಕಿದೆ. 75ನೇ ವರ್ಷದ ಅಮೃತ ಮಹೋತ್ಸವದಲ್ಲಿ ನೆಲದ ಭಾಷೆಯನ್ನೇ ಭಾರತ ಸರಕಾರ ಕಡೆಗಣಿಸುತ್ತಿರುವುದು ನಿಜಕ್ಕೂ ಖಂಡನಾರ್ಹ. ಇದನ್ನು ಕರವೇ ಕಟುವಾಗಿ ವಿರೋಧಿಸುತ್ತದೆ‌.
50
118
480
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
4 years
ಮಹಾರಾಷ್ಟ್ರದ ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಮರಾಠಿ ಬಳಸುವಂತೆ ಅಲ್ಲಿನ ಸರ್ಕಾರ ಆದೇಶ ನೀಡಿದೆ. ಆದೇಶದ ಪ್ರಕಾರ ಎಲ್ಲ ಕೇಂದ್ರ ಸರ್ಕಾರಿ ಅಧಿಕಾರಿಗಳೂ ಮರಾಠಿಯನ್ನು ಅಧಿಕೃತ ಸಂಪರ್ಕ ಭಾಷೆಯನ್ನಾಗಿ ಬಳಸಬೇಕು, ತಪ್ಪಿದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕರ್ನಾಟಕ ಸರ್ಕಾರ ಇಂಥ ಆದೇಶ ಹೊರಡಿಸುವುದು ಯಾವಾಗ?
Tweet media one
20
124
462
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರು ನಮ್ಮ ಆದರ್ಶ. ಕನ್ನಡಿಗರ ಸಾಮ್ರಾಜ್ಯ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಮಹಾಸೇನಾನಿ. ತಾಯ್ನೆಲಕ್ಕಾಗಿ ಬ್ರಿಟಿಷರಿಂದ ಗಲ್ಲಿಗೇರಿದ ಹುತಾತ್ಮ. ಅವರ ಪ್ರತಿಮೆ ವಿರೂಪಗೊಳಿಸುವುದರಿಂದ ಅವರ ಘನತೆಯೇನು ಕುಂದುವುದಿಲ್ಲ. #BanMES #BanShivasene
12
219
467
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
ಕರ್ನಾಟಕದಲ್ಲಿ ವ್ಯವಹರಿಸುವ ಯಾವುದೇ ಸಂಸ್ಥೆಯಾಗಲಿ ಕನ್ನಡವನ್ನು ಬಳಸಬೇಕು, ಕನ್ನಡದಲ್ಲಿ‌ ವ್ಯವಹರಿಸಬೇಕು. ಕನ್ನಡ ಬೇಡ ಎನ್ನುವವರು ಬೇರೆ ರಾಜ್ಯಗಳಲ್ಲಿ ಹೋಗಿ ವ್ಯವಹಾರ ನಡೆಸಲಿ. ಕನ್ನಡ ಬೇಡವೆನ್ನುವವರು ಕನ್ನಡಿಗರಿಗೂ ಬೇಡ. #RejectKFC #kfc ಕನ್ನಡಬೇಕು
10
218
456
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
ನೂರೈವತ್ತು ರುಪಾಯಿ ಬೆಲೆಯ‌ ಲಸಿಕೆ ಒಂದೂವರೆ ಸಾವಿರಕ್ಕೆ ಮಾರಾಟ! ದಕ್ಷಿಣದ ರಾಜ್ಯಗಳಲ್ಲಿ ಸರ್ವರಿಗೂ ಉಚಿತ ವ್ಯಾಕ್ಸಿನ್. ಕರ್ನಾಟಕದಲ್ಲಿ ಮಾತ್ರ ದುಬಾರಿ ಬೆಲೆ ತೆರಬೇಕು? ಯಾಕೀ ಅನ್ಯಾಯ? #ಲಸಿಕೆಯಲ್ಲೂಮೋಸ
24
140
462
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟಗಳನ್ನು ಸುಡಲಾಗುತ್ತಿದೆ. ಕನ್ನಡ ಬಾವುಟ ನಮ್ಮ ಅಸ್ಮಿತೆಯ ಸಂಕೇತ. ನಮಗೆ ಕನ್ನಡ ಬಾವುಟವೇ ದೈವ. ನಮ್ಮ ಸ್ವಾಭಿಮಾನವನ್ನು ಕೆಣಕಿದ್ದೀರಿ. ಇದಕ್ಕೆ ಉತ್ತರ‌ಕೊಟ್ಟೇ ಕೊಡುತ್ತೇವೆ. ಯಾವುದು ಇವತ್ತು ಮಹಾರಾಷ್ಟ್ರವೋ ಅದು ಹಿಂದೆ ಕನ್ನಡದ ನೆಲವಾಗಿತ್ತು ಎಂಬುದು ಈ ಹೇಡಿಗಳಿಗೆ ತಿಳಿದಿಲ್ಲ. #BanMES #BanShivasene
18
212
441
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಸ್ಟಾಫ್ ಸೆಲೆಕ್ಷನ್ ಕಮಿಟಿ ಡಿಸೆಂಬರ್ ನಲ್ಲಿ ನಡೆಸಲಿರುವ ಉದ್ಯೋಗ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಬರೆಯುವ ಅವಕಾಶ ನೀಡದೆ ಕನ್ನಡಿಗರಿ���ೆ ದ್ರೋಹ ಎಸಗಲಾಗಿದೆ. ಇದು ಭಾರತ ಒಕ್ಕೂಟದಲ್ಲಿ ಕನ್ನಡಿಗರನ್ನು ತುಳಿಯುವ ಹುನ್ನಾರ. ಸರ್ಕಾರ ಕೂಡಲೇ ಪರೀಕ್ಷೆ ಸ್ಥಗಿತಗೊಳಿಸಿ ಹೊಸದಾಗಿ ಅಧಿಸೂಚನೆ ಹೊರಡಿಸಬೇಕು. #SSCDroha
12
183
451
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
ಆಳುವ ಸರ್ಕಾರವನ್ನು ಟೀಕಿಸಿದರು ಎಂಬ ಕಾರಣಕ್ಕೆ ಕನ್ನಡದ ಹೆಮ್ಮೆಯ ಸಾಹಿತಿ, ಸಂಶೋಧಕ ನಾಡೋಜ ಹಂಪನಾ‌ ಅವರನ್ನು ಪೊಲೀಸ್ ಠಾಣೆಗೆ ಕರೆಯಿಸಿ, ಅಪಮಾನಿಸಲಾಗಿದೆ.‌‌ ಇದನ್ನು ಮಾಡಿದವರದು ವಿಕೃತ ಮನಸ್ಥಿತಿ. ಕನ್ನಡಿಗರ ಪರಂಪರೆಯ ಮೇಲೆ ಮಾಡಿದ ಹಲ್ಲೆಯಿದು. ಈ‌ ದುಷ್ಕೃತ್ಯಕ್ಕೆ ಯಾರು ಕಾರಣರೋ ಅವರ‌ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು.(1/8)
6
111
435
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಕರ್ನಾಟಕದ ಶಾಲೆ ಕಾಲೇಜುಗಳಲ್ಲಿ ಭುಗಿಲೆದ್ದಿರುವ ವಿವಾದ ದುರುದ್ದೇಶಪೂರ್ವಕವಾಗಿದ್ದು, ನಾಡಿನ ಶಾಂತಿ, ಸೌಹಾರ್ದತೆ, ಸಹಬಾಳ್ವೆಗೆ ಧಕ್ಕೆ ತಂದಿದೆ. ಕರ್ನಾಟಕವನ್ನು ಉತ್ತರ ಪ್ರದೇಶವನ್ನಾಗಿಸುವ ಈ ಕುಟಿಲ ತಂತ್ರವನ್ನು ರಾಜ್ಯದ ಶಾಂತಿಪ್ರಿಯ ನಾಗರಿಕರು ವಿಫಲಗೊಳಿಸಬೇಕು. (1/8)
33
114
442
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ ಒದಗಿಸದೆ ರಾಜ್ಯ ಸರ್ಕಾರ ನಿಧಾನ ವಿಷವುಣಿಸಿ ಕೊಲ್ಲುತ್ತಿದೆ. ನಾವು ಒಟ್ಟಾಗಿ ನಿಂತು ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳಬೇಕಿದೆ. ನಾಳೆ ಸಂಜೆ 5 ಗಂಟೆಗೆ ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸಿರುವ ಟ್ವಿಟರ್ ಅಭಿಯಾನದಲ್ಲಿ ಈ ಕುರಿತು ಮಾತನಾಡೋಣ. ಸರ್ಕಾರವನ್ನು ಎಚ್ಚರಿಸೋಣ.‌ #ಕನ್ನಡವಿವಿಉಳಿಸಿ
Tweet media one
10
116
434
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
"ಮರಾಠಾ ಅಭಿವೃದ್ಧಿ ಪ್ರಾಧಿಕಾರ" ರಚನೆಯ ಹೆಸರಿನಲ್ಲಿ ಹೀನ ರೀತಿಯ ವೋಟ್ ಬ್ಯಾಂಕ್ ರಾಜಕಾರಣ ನಡೆಸಿ, ಕನ್ನಡದ ಜನತೆಯನ್ನು ಒಡೆದು ಆಳುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಇಂದು ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಏರ್ಪಡಿಸಿದ್ದ ಪ್ರತಿಭಟನೆ ಸಂಪೂರ್ಣ ಯಶಸ್ವಿಯಾಗಿದೆ. (1/5)
8
74
432
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
1 year
ಕನ್ನಡಿಗರಿಗೆ ತಮಿಳರ ಬಗ್ಗೆಯಾಗಲೀ, ತಮಿಳು ನಾಡಗೀತೆ ಬಗ್ಗೆಯಾಗಲೀ ಅಗೌರವವಿಲ್ಲ. ಆದರೆ ಕರ್ನಾಟಕದಲ್ಲಿ ತಮಿಳು ನಾಡಗೀತೆ ಹಾಡಿಸುವ ಔಚಿತ್ಯವಾದರೂ ಏನು? ತಮಿಳರ‌ನ್ನು ಓಲೈಸಲು ಇಷ್ಟು ಕೆಳಮ��್ಟಕ್ಕೆ ಇಳಿಯಬೇಕಾಗಿರಲಿಲ್ಲ. ತಾಕತ್ತಿದ್ದರೆ ಇದೇ ಅಣ್ಣಾಮಲೈ ತಮಿಳುನಾಡಿನಲ್ಲಿ ಕನ್ನಡಿಗರ ಸಮಾವೇಶ ನಡೆಸಿ ಕರ್ನಾಟಕದ ನಾಡಗೀತೆ ಹಾಡಿಸಲಿ ನೋಡೋಣ. (4/6)
15
116
441
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
6 months
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ಇಡಬೇಕೆಂದು ನಾವು ಹೋರಾಟ ನಡೆಸಿ ಯಶಸ್ವಿಯಾಗಿದ್ದೆವು. ಅದೇ ರೀತಿ ಈಗ ನಾಲ್ಕು ವಿಮಾನ ನಿಲ್ದಾಣಗಳಿಗೆ ಕರ್ನಾಟಕದ ನಾಲ್ವರು ಮೇರುಸಾಧಕರ ಹೆಸರು ಇಡಬೇಕೆಂಬ ನಮ್ಮ ಹೋರಾಟದ ಬೇಡಿಕೆಯೂ ಈಗ ಈಡೇರಿದಂತಾಗಿದೆ.(5/5)
21
66
438
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
5 months
ಬೆಂಗಳೂರಿನಲ್ಲಿ ಕನ್ನಡವನ್ನು, ಕನ್ನಡಿಗರನ್ನು ತಿರಸ್ಕಾರದಿಂದ ನೋಡುತ್ತಿದ್ದವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ಪಷ್ಟ ಸಂದೇಶ ನೀಡಿದೆ. ಕನ್ನಡಿಗರ ತಾಳ್ಮೆಯನ್ನು ಕೆಣಕಿದರೆ ಏನಾಗುತ್ತದೆ ಎಂಬುದಕ್ಕೆ ಇವತ್ತಿನ ಪ್ರತಿಭಟನೆ ಉದಾಹರಣೆ. (2/8)
5
81
433
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಕರ್ನಾಟಕದ ಅಸ್ಮಿತೆಗೆ ಧಕ್ಕೆ ತಂದಿರುವ ಪರಿಷ್ಕೃತ ಪಠ್ಯವನ್ನು ಹಿಂದಕ್ಕೆ ಪಡೆಯಲು ಮೇಲಿಂದ ಮೇಲೆ ಗೌರವಾನ್ವಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು @BSBommai ವಿನಂತಿಸಿದ್ದೇನೆ. ಇನ್ನು ತಡಮಾಡುವುದು ಸರಿಯಲ್ಲ. ಪರಿಷ್ಕೃತ ಪಠ್ಯ ಹಿಂದಕ್ಕೆ ಪಡೆಯಿರಿ. ಜನರ ಅಭಿಮತಕ್ಕೆ ಗೌರವ ಕೊಡಿ. #ನಾಡದ್ರೋಹಿBJPಸರ್ಕಾರ #BoycottRSSTextBooks
14
176
424
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
4 months
ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡವನ್ನು ಕಡ್ಡಾಯಗೊಳಿಸುವ ಕನ್ನಡ ವಿಧೇಯಕಕ್ಕೆ ರಾಜ್ಯದ ವಿಧಾನಸಭೆ ಅಂಗೀಕಾರ ನೀಡಿದೆ. ದಶಕಗಳಿಂದ ಕನ್ನಡಿಗರು ಕೇಳುತ್ತ ಬಂದ ದಿನ ಕೊನೆಗೂ ಬಂದಿದೆ. ಕನ್ನಡಿಗರ ಧ್ವನಿಗೆ ಶಕ್ತಿ ಬಂದಿದೆ. ಇದಕ್ಕಾಗಿ ನಾಡಿನ ಏಳು ಕೋಟಿ ಕನ್ನಡಿಗರನ್ನು ಅಭಿನಂದಿಸುತ್ತೇನೆ. (1/7)
11
75
426
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಒಂದು ವೇಳೆ ಸರ್ಕಾರ ಕೂಡಲೇ ಪರಿಷ್ಕೃತ ಪಠ್ಯಗಳನ್ನು ಹಿಂದಕ್ಕೆ ಪಡೆಯದಿದ್ದರೆ ಪರಿಸ್ಥಿತಿ ಕೈಮೀರಿ ಹೋಗುವುದು ಖಚಿತ. ಇಡೀ ರಾಜ್ಯದ ಶಾಂತಿ ಕದಡಿ ಹೋಗುತ್ತದೆ. ಅದರ ಹೊಣೆಯನ್ನು ಸರ್ಕಾರವೇ ಹೊರಬೇಕಾಗುತ್ತದೆ. ಜನರನ್ನು ಎದುರುಹಾಕಿಕೊಂಡ ಸರ್ಕಾರಗಳು ಉಳಿಯುವುದಿಲ್ಲ. ಇದನ್ನು ಮರೆಯಬೇಡಿ. #ನಾಡದ್ರೋಹಿBJPಸರ್ಕಾರ #BoykottRSSTextBooks
44
163
420
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಒಕ್ಕೂಟ ಸರ್ಕಾರ ಪದೇಪದೇ ಕನ್ನಡಿಗರ ಮೇಲೆ ಹಿಂದಿಯನ್ನು ಹೇರುವ ಮೂಲಕ ಕನ್ನಡಿಗರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿಸಲು ಪ್ರಯತ್ನಿಸುತ್ತಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಕನ್ನಡಕ್ಕೆ ಧಕ್ಕೆಯಾದರೆ ಕರವೇ ಸಹಿಸುವುದಿಲ್ಲ. #ಹಿಂದಿಹೇರಿಕೆ
Tweet media one
19
124
416
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
ಯಾರಿಗೆ ಬಂತು, ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಎಂಬಂಥ ಬಂಡಾಯದ ಗೀತೆಗಳನ್ನು ನೀಡಿ, ಕ್ರಾಂತಿಯ ತಲ್ಲಣಗಳನ್ನು ಎಬ್ಬಿಸಿದ್ದ ಕವಿ ಡಾ.ಸಿದ್ಧಲಿಂಗಯ್ಯನವರು ತೀರಿಕೊಂಡಿರುವುದು ಕನ್ನಡ ನಾಡಿಗಾದ ಅಪಾರ ನಷ್ಟ. ಕರವೇ ಏರ್ಪಡಿಸಿದ್ದ ಹಲವಾರು ಕಾರ್ಯಕ್ರಮಗಳಿಗೆ ಅವರು ಬಂದಿದ್ದರು. ಪ್ರೀತಿಯಿಂದ ಮಾರ್ಗದರ್ಶನ ನೀಡಿದ್ದರು. ಭಾವಪೂರ್ಣ ನಮನಗಳು.
Tweet media one
6
48
407
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
ಕನ್ನಡ ಬಳಕೆ ಮಾಡದ ಕೆಎಫ್ ಸಿ ಕೂಡಲೇ ಕನ್ನಡಿಗರ ಕ್ಷಮೆ ಯಾಚಿಸಬೇಕು. ಕನ್ನಡದಲ್ಲೇ ವ್ಯವಹರಿಸಬೇಕು, ಮಳಿಗೆಗಳಲ್ಲಿ ಕನ್ನಡದ ಹಾಡುಗಳನ್ನು ಪ್ರಸಾರ ಮಾಡಬೇಕು. ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಕ್ಕ ಪಾಠ ಕಲಿಸಲಿದ್ದಾರೆ. #kfc ಕನ್ನಡಬೇಕು #RejectKFC
10
209
402
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಕರ್ನಾಟಕ ರಕ್ಷಣಾ‌ ವೇದಿಕೆ ಮೊದಲಿನಿಂದಲೂ ಈ ಬಗೆಯ ದಿಢೀರ್ ಬಂದ್ ಕರೆಗಳಿಂದ ದೂರ ಉಳಿಯುತ್ತ ಬಂದಿದೆ. ಬಂದ್ ಎಲ್ಲ ಸಮಸ್ಯೆಗಳಿಗೂ ಪರಿಹಾರವಲ್ಲ, ಅದೊಂದೇ‌ ಚಳವಳಿಯ ಮಾರ್ಗವಲ್ಲ. ಬಂದ್ ಚಳವಳಿಯ ಕೊನೆಯ ಅಸ್ತ್ರವಾಗಬೇಕು ಎಂಬುದು ನಮ್ಮ ನಿಲುವು. (4/6)
17
62
405
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ರಾಜ್ಯ ಸರ್ಕಾರ ಕೂಡಲೇ‌ ಎಂಇಎಸ್ ಮತ್ತು ಶಿವಸೇನೆ ಎಂಬ ಪುಂಡರ, ಸಮಾಜಘಾತಕರ‌ ಗುಂಪುಗಳನ್ನು ನಿಷೇಧಿಸಬೇಕು. ಸರ್ಕಾರಕ್ಕೆ ಇವರ ಮೇಲೆ ಕ್ರಮಕೈಗೊಳ್ಳುವ ಶಕ್ತಿ ಇಲ್ಲದಿದ್ದರೆ ಆ ಜವಾಬ್ದಾರಿ ನಮಗೆ ನೀಡಿ. ಬೆಳಗಾವಿಯಲ್ಲಿ ಈ ಸಮಾಜಘಾತಕರ ಕುಕೃತ್ಯಗಳು ಮುಂದುವರೆದರೆ ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ನೀಡಬೇಕಾಗುತ್ತದೆ. #BanMES #BanShivaSene
10
215
406
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
5 months
ಪೊಲೀಸ್ ಇಲಾಖೆ ಇವತ್ತಿನ ಹೋರಾಟದ ಹಿನ್ನೆಲೆಯಲ್ಲಿ ನಮ್ಮ‌ ಕಾರ್ಯಕರ್ತರ ವಿರುದ್ಧ ಸುಳ್ಳು ಮೊಕದ್ದಮೆ ಹೂಡುವುದು, ಕಿರುಕುಳ ನೀಡುವುದನ್ನು ಮಾಡಕೂಡದು. ಅಂಥದ್ದೇನಾದರೂ ನಡೆದರೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಬೇಕಾಗುತ್ತದೆ. (7/8)
16
79
411
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಮಹಾರಾಷ್ಟ್ರದಲ್ಲಿ ಕನ್ನಡಿಗರ ಮನೆಗಳ‌ ಮೇಲೆ ಕಲ್ಲು ಹೊಡೆಯಲಾಗುತ್ತಿದೆ. ಕನ್ನಡಿಗರ ವಾಹನಗಳನ್ನು ಜಖಂಗೊಳಿಸಲಾಗುತ್ತಿದೆ. ಕನ್ನಡಿಗರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಒಕ್ಕೂಟ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಕನ್ನಡಿಗರಿಗೆ ರಕ್ಷಣೆ ಒದಗಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡಬೇಕು. #BanMES #BanShivasene
15
210
401
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಶಿವಸೇನೆ ಮತ್ತು ಎಂಇಎಸ್ ಸಂಘಟನೆಗಳು ಭಯೋತ್ಪಾದಕ ಸಂಘಟನೆಗಳು‌. ರಾಜ್ಯದ ಶಾಂತಿ-ನೆಮ್ಮದಿಯನ್ನು ಹಾಳು ಮಾಡಿದ ಈ ಎರಡೂ ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧಿಸಿ, ಅವುಗಳ ಮುಖಂಡರನ್ನು ಮಹಾರಾಷ್ಟ್ರಕ್ಕೆ ಗಡಿಪಾರು ಮಾಡಬೇಕು. ರಾಜ್ಯ ಸರ್ಕಾರ ರಣಹೇಡಿಯಂತೆ ನಡೆದುಕೊಳ್ಳಬಾರದು. ದಿಟ್ಟತನ ತೋರಬೇಕು #BanMES #BanShivaSene
13
204
393
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
ಗರ್ವವಿಲ್ಲದ, ಸಹಜವಾಗಿ ಎಲ್ಲರೊಂದಿಗೆ ಕಲೆತು ಬೆರೆಯುವ ಪುನೀತ್ ರಾಜಕುಮಾರ್, ಎಷ್ಟೇ ಖ್ಯಾತಿ ದೊರೆತರೂ ನಿಂತ ನೆಲವನ್ನು ಮರೆತರವರಲ್ಲ. ಯಾವುದೇ ರೀತಿಯ ವಿವಾದಗಳಿಗೆ ಗುರಿಯಾದವರಲ್ಲ. ಅಂತರಂಗ, ಬಹಿರಂಗಗಳೆರಡನ್ನೂ ಶುದ್ಧವಾಗಿ, ಪಾರದರ್ಶಕವಾಗಿ ಇಟ್ಟುಕೊಂಡವರು. ಇಂಥ ಜೀವಗಳು ಅಪರೂಪ. (2/4)
4
46
396
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಮಾಗಡಿ ಬಳಿ ನೂರು ಎಕರೆ ಜಾಗವನ್ನು ವಿವಿಗಾಗಿ ನೀಡಲಾಗಿದೆ. 359 ಕೋಟಿ ರುಪಾಯಿ ಕೊಡಲಾಗಿದೆ. ಇನ್ನೂ ಸಾವಿರಾರು ಕೋಟಿ ರುಪಾಯಿ ನಮ್ಮ ಹಣವನ್ನು ಕೊಡುವ ಸಾಧ್ಯತೆ ಇದೆ. ಈ ಎಲ್ಲ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಬೇಕು. ಇಲ್ಲವಾದಲ್ಲಿ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ.(4/8) #ಸಂಸ್ಕೃತವಿವಿಬೇಡ #SayNoToSanskrit
25
165
398
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಕನ್ನಡಿಗರ ತೆರಿಗೆ ಹಣದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಬೇಕಾಗಿಲ್ಲ. ಹಿಂದೆ ಇದೇ ಸಂಸ್ಕೃತ ಹೇರಿಕೆ ವಿರುದ್ಧ ಡಾ.ರಾಜಕುಮಾರ್ ಅವರ ನೇತೃತ್ವದಲ್ಲಿ ಗೋಕಾಕ್ ಚಳವಳಿ ನಡೆದಿತ್ತು. ಈಗ ಮತ್ತೆ ಅಂಥದ್ದೇ ಕಾಲ ಬಂದಿದೆ. ನಾಳೆ ಎಲ್ಲರೂ #ಸಂಸ್ಕೃತವಿವಿಬೇಡ #SayNoToSanskrit ಹ್ಯಾಶ್ ಟ್ಯಾಗ್ ಗಳೊಂದಿಗೆ ಟ್ವೀಟ್ ಮಾಡಲು ಕೋರುತ್ತೇನೆ.
Tweet media one
36
144
399
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
5 months
ಕನ್ನಡಿಗರು ಇತರೆ ರಾಜ್ಯಗಳಿಗೆ ಹೋದಾಗ ಅಲ್ಲಿನ ನುಡಿ, ಸಂಸ್ಕೃತಿಗಳನ್ನು ಗೌರವಿಸುತ್ತ ಬದುಕುತ್ತಿದ್ದಾರೆ. ಆದರೆ ಕರ್ನಾಟಕಕ್ಕೆ ಬರುವ ಉತ್ತರ ಭಾರತೀಯರೇಕೆ ಕನ್ನಡವನ್ನು ಗೌರವಿಸುತ್ತಿಲ್ಲ, ಕರ್ನಾಟಕವನ್ನು ಗೌರವಿಸುತ್ತಿಲ್ಲ? ಕನ್ನಡದ ನೆಲ, ಜಲ, ಸಂಪತ್ತು ಬೇಕು, ಕನ್ನಡ ಬೇಡವೆಂದರೆ ಹೇಗೆ? #ಕನ್ನಡದಲ್ಲಿನಾಮಫಲಕ
17
117
394
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ವಿಶ್ವಮಾನವ, ಕ್ರಾಂತಿಕಾರಿ, ಮಹಾಕವಿ ಕುವೆಂಪು ಹೋರಾಟ ಸಮಿತಿ ಜೂನ್ 18ರಂದು ಏರ್ಪಡಿಸಿರುವ ಬೃಹತ್ ಪ್ರತಿಭಟನೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿಸುತ್ತದೆ ಮತ್ತು ವೇದಿಕೆಯ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಸರ್ಕಾರ ಕೂಡಲೇ ಪರಿಷ್ಕೃತ ಪಠ್ಯಪುಸ್ತಕಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸುತ್ತದೆ.
7
123
395
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
ಶಿವಮೊಗ್ಗದಲ್ಲಿ ನಡೆದ ಸಿಆರ್ ಪಿಎಫ್ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಸಂಪೂರ್ಣ ಹಿಂದಿ ಬ್ಯಾನರುಗಳನ್ನು ಬಳಸಿ, ಹಿಂದಿಯಲ್ಲೇ ನಿರೂಪಣೆ ಮಾಡಿರುವುದನ್ನು ಗಮನಿಸಿದೆ. ಇದು ಬೇರೇನೂ ಅಲ್ಲ, ಕನ್ನಡಿಗರ ಮೇಲೆ ಹಿಂದಿ ಸಾಮ್ರಾಜ್ಯಶಾಹಿಗಳು ಹೂಡಿರುವ ಪರೋಕ್ಷ ಯುದ��ಧ. ಕನ್ನಡತನವನ್ನು ನಾಶಗೊಳಿಸುವ ವ್ಯವಸ್ಥಿತ ದಾಳಿ. (1/5)
Tweet media one
11
125
385
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
1 year
ಕರ್ನಾಟಕ ರಕ್ಷಣಾ ವೇದಿಕೆ ಈ ಹಿಂದೆ ಆಂಧ್ರಪ್ರದೇಶದ ಕಲಬೆರೆಕೆ ಹಾಲಿನ ವಿರುದ್ಧ ಹೋರಾಟ ಸಂಘಟಿಸಿ ನಿಲ್ಲಿಸುವಲ್ಲಿ ಯಶಸ್ವಿಯಾಗಿತ್ತು. ಅದೇ ರೀತಿ ಈಗ ಅಮೂಲ್ ವಿರುದ್ಧವೂ ಚಳವಳಿ ರೂಪಿಸಲಿದೆ. ನಂದಿನಿ ವಿರುದ್ಧ ನಡೆದಿರುವ ಪಿತೂರಿಗೆ ಕರವೇ ಸಂಬಂಧಪಟ್ಟವರಿಗೆ ತಕ್ಕ ಪಾಠ ಕಲಿಸಲಿದೆ. (2/7) #SaveNandini
39
130
384
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಬಸವಣ್ಣ, ಅಲ್ಲಮಪ್ರಭು, ವಾಲ್ಮೀಕಿ, ಕನಕದಾಸ, ಪುರಂದರದಾಸ, ಶಂಕರಾಚಾರ್ಯ, ಶಿಶುನಾಳ ಶರೀಫ, ಕುವೆಂಪು ಮೊದಲುಗೊಂಡು ಕರ್ನಾಟಕದ ದಾರ್ಶನಿಕರು, ಸಂತರಿಗೆ ಪರಿಷ್ಕೃತ ಪಠ್ಯದಲ್ಲಿ ಅಪಮಾನಿಸಲಾಗಿದೆ. ಕನ್ನಡತನ, ಕನ್ನಡಾಭಿಮಾನಕ್ಕೆ ಕುತ್ತು ತರಲಾಗಿದೆ. ಇದನ್ನು ಒಪ್ಪಿಕೊಳ್ಳುವುದು ಸಾಧ್ಯವೇ ಇಲ್ಲ. #ನಾಡದ್ರೋಹಿBJPಸರ್ಕಾರ #BoykottRSSTextBooks
11
163
386
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
ಹಿಂದಿ ಹೇರಿಕೆಯ ಪರಿಣಾಮವಾಗಿ ಕೇಂದ್ರ ಸರ್ಕಾರದ ಉದ್ಯೋಗಗಳು ಹಿಂದಿ ಭಾಷಿಕರ ಪಾಲಾಗುತ್ತಿವೆ. ಕನ್ನಡದ ಮಕ್ಕಳು ನಿರುದ್ಯೋಗದ ಸಮಸ್ಯೆ ಎದುರಿಸುವಂತಾಗಿದೆ. ಕರ್ನಾಟಕಕ್ಕೆ ಉತ್ತರದ ರಾಜ್ಯಗಳಿಂದ ವಲಸೆ ವಿಪರೀತವಾಗಿದ್ದು, ಕನ್ನಡಿಗರ ಅಸ್ಮಿತೆ, ಸಂಸ್ಕೃತಿ, ಪರಂಪರೆ ಮತ್ತು ಬದುಕು ಅಪಾಯಕ್ಕೆ ಸಿಲುಕಿದೆ. (7/9)
8
83
375
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
4 years
ರಜನೀಕಾಂತ್ ಅವರ ದರ್ಬಾರ್ ಸಿನಿಮಾ ತಮಿಳು, ಹಿಂದಿ ಮತ್ತು ತೆಲುಗಿನಲ್ಲಿ ಈ ವಾರ ತೆರೆಕಾಣುತ್ತಿದೆ. ಕನ್ನಡದಲ್ಲಿ ಏಕಿಲ್ಲ? ಕನ್ನಡದಲ್ಲಿ ಡಬ್ ಮಾಡುವುದನ್ನು ತಡೆದಿರುವವರು ಯಾರು? ನಿರ್ಮಾಪಕರಾ? ವಿತರಕರಾ? ಪ್ರದರ್ಶಕರಾ? ಅಥವಾ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೇ? ಕನ್ನಡದಲ್ಲಿ ಬರದ ಪರಭಾಷಾ ಸಿನಿಮಾಗಳು ನಮಗೆ ಬೇಡ.
Tweet media one
28
121
364
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಸಂವಿಧಾನದಲ್ಲಿ ಹಿಂದಿ ಭಾಷೆಗೆ ನೀಡಿರುವ ಹೆಚ್ಚುಗಾರಿಕೆಯಿಂದಲೇ ಕೆಲ ಹಿಂದಿ ಭಾಷಿಕರು ಹಿಂದಿಯೇತರ ಮೇಲೆ ಯಜಮಾನಿಕೆ ತೋರುತ್ತಾರೆ. ಹಿಂದಿ ಚಿತ್ರನಟ ಅಜಯ್ ದೇವಗನ್ ಅವರ ಹೇಳಿಕೆ ಹಿಂದಿ ಪಟ್ಟಭದ್ರರ ಯಜಮಾನಿಕೆಯ ಪ್ರದರ್ಶನ. ಹಿಂದಿಗೆ ಪ್ರಾಮುಖ್ಯತೆ ನೀಡುವ ಅಂಶಗಳನ್ನು ಸಂವ��ಧಾನದಿಂದ ಕೈಬಿಡದ ಹೊರತು ಈ ಯಜಮಾನಿಕೆ ಪ್ರದರ್ಶನ ನಿಲ್ಲುವುದಿಲ್ಲ(1/7)
2
90
378
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
5 months
ಫೆಬ್ರವರಿ 28ರೊಳಗೆ ರಾಜ್ಯದ ಎಲ್ಲ ಭಾಗಗಳಲ್ಲೂ ನಾಮಫಲಕಗಳು, ಜಾಹೀರಾತು ಫಲಕಗಳು ಕನ್ನಡೀಕರಣಗೊಳ್ಳಬೇಕು. ಇದು ಸರ್ಕಾರದ ಜವಾಬ್ದಾರಿ, ನಮ್ಮೆಲ್ಲರ ಜವಾಬ್ದಾರಿ. ನೀವು ಇರುವ ಪ್ರದೇಶಗಳಲ್ಲಿ ನಾಮಫಲಕಗಳು ಕನ್ನಡೀಕರಣಗೊಳ್ಳದಿದ್ದರೆ ನೀವೇ ಪ್ರಶ್ನಿಸಿ. ಎಲ್ಲದಕ್ಕೂ ಹೋರಾಟಗಾರರಿಗೆ ಕಾಯಬೇಡಿ. (4/5)
3
77
379
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
7245 ಮೆಡಿಕಲ್ ಸೀಟುಗಳು ಇರುವ ಕರ್ನಾಟಕದಿಂದ ಅತಿ ಹೆಚ್ಚು ಸೀಟುಗಳನ್ನು ಬೇರೆ ರಾಜ್ಯಗಳಿಗೆ ಹಂಚುವ ವ್ಯವಸ್ಥೆಯೇ ನೀಟ್. ಒಂದು ದೇಶ, ಒಂದು ಪರೀಕ್ಷೆ ಹೆಸರಲ್ಲಿ ಒಕ್ಕೂಟ ಸರ್ಕಾರ ಕನ್ನಡದ ಮಕ್ಕಳ ಹಕ್ಕನ್ನು ಕಸಿದಿದೆ.‌ ಅದರ ಪರಿಣಾಮವಾಗಿಯೇ ಕನ್ನಡದ ಮಕ್ಕಳು ಹೊರದೇಶಗಳಿಗೆ ಹೋಗುವಂತಾಗಿದೆ. #BanNeet #RIPNaveen
Tweet media one
15
180
375
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
4 years
ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ತುಮಕೂರಿಗೆ ಬಂದು ಭಾಷಣ ಮಾಡಲಿದ್ದಾರೆ. ಕರ್ನಾಟಕಕ್ಕೆ ಬಂದಾಗ ಅವರು ಕರ್ನಾಟಕದ ವಿಷಯ ಮಾತನಾಡಬೇಕು, ಕಾಶ್ಮೀರದ ವಿಷಯವನ್ನಲ್ಲ. ವಿಜಯವಾಣಿ ಪತ್ರಿಕೆಯು ಎತ್ತಿರುವ ಈ ಹತ್ತು ಪ್ರಶ್ನೆಗಳಿಗೆ ಮೋದಿಯವರು ಇಂದು ಉತ್ತರಿಸುತ್ತಾರೆಯೇ? @narendramodi @PMOIndia @VVani4U
Tweet media one
69
95
364
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಜಗತ್ತಿನ ಶ್ರೇಷ್ಠ ಕ್ರಾಂತಿ ಬಸವ ಕ್ರಾಂತಿ, ಯಾರನ್ನೂ ದ್ವೇಷಿಸದೇ, ದಯವೇ ಧರ್ಮದ ಮೂಲವಯ್ಯ ಎಂದು ಸಕಲರನ್ನು ಬಿಗಿದಪ್ಪಿದ ಮಹಾನ್ ಚೇತನಕ್ಕೆ ಮಸಿ ಬಳಿದ ಜನರ ಸಂಸ್ಕೃತಿ ಎಂತದ್ದೆನ್ನುವುದು ಸಮಾಜ ಅರ್ಥಮಾಡಿಕೊಳ್ಳಬೇಕಿದೆ. ಬಸವಣ್ಣ ಬದುಕಿದ್ದಿದ್ದರೆ ಇವರ ದ್ವೇಷ, ಅಸಹನೆ ಕಂಡು ಅನುಕಂಪ ಪಡುತ್ತಿದ್ದರು, ಮರುಗುತ್ತಿದ್ದರು.
2
89
364
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಅಪಮಾನ ಮಾಡಿದ ಆರೋಪ ಮೇರೆಗೆ ಬಂಧಿತರಾಗಿರುವ ಹದಿಮೂರು ಮಂದಿ ಕನ್ನಡ ಕಾರ್ಯಕರ್ತರ ಮೇಲೆ ರಾಜ್ಯ ಸರ್ಕಾರ ಅತಿರೇಕದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಈ ಕಾರ್ಯಕರ್ತರ ಮೇಲೆ ಇಲ್ಲಸಲ್ಲದ ಸೆಕ್ಷನ್ ಗಳನ್ನು ಹೂಡಲಾಗುತ್ತಿದೆ. ಇದು ಆಘಾತಕಾರಿಯಾಗಿದೆ. (1/6)
13
86
354
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ರಾಜ್ಯದಲ್ಲಿ ಕನ್ನಡಿಗರ ತೆರಿಗೆ ಹಣದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆ ಅಗತ್ಯವಿರಲಿಲ್ಲ. ಕನ್ನಡಿಗರ ಮೇಲೆ ಪರನುಡಿಯನ್ನು ಹೇರುವ ಇಂಥ ಯತ್ನವನ್ನು ಕರ್ನಾಟಕ ರಕ್ಷಣಾ ವೇದಿಕೆ ಸಹಿಸುವುದಿಲ್ಲ. ಸರ್ಕಾರ ಏನೇ ಬಲಪ್ರಯೋಗ ಮಾಡಿದರೂ ವಿಶ್ವವಿದ್ಯಾಲಯ ಆರಂಭಕ್ಕೆ ನಾವು ಅವಕಾಶ ನೀಡುವುದಿಲ್ಲ.(1/8) #ಸಂಸ್ಕೃತವಿವಿಬೇಡ #SayNoToSanskrit
351
161
351
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
6 months
ಈ ಐತಿಹಾಸಿಕ ನಿರ್ಣಯಕ್ಕೆ ಕಾರಣಕರ್ತರಾದ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಎಲ್ಲ ಶಾಸಕರನ್ನು ಅಭಿನಂದಿಸುತ್ತೇನೆ. ಕನ್ನಡಿಗರ ಬೇಡಿಕೆ ಈಡೇರಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು. ನಾಡುನುಡಿಯ ವಿಷಯದಲ್ಲಿ ಒಮ್ಮತದ ನಿಲುವು ಅಭಿನಂದನಾರ್ಹ (4/5)
8
51
358
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
ಯಾರು ಏನೇ ಹೇಳಿದರೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಕರ್ನಾಟಕದ ಒಂದಿಂಚು ಭೂಮಿಯನ್ನೂ ಕಬಳಿಸಲು ಕರವೇ ಬಿಡುವುದಿಲ್ಲ. ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಬೆಳಗಾವಿಯ ಚಿಂತೆಯನ್ನು ಬಿಟ್ಟು ಮಹಾರಾಷ್ಟ್ರದ ಅಭಿವೃದ್ದಿಯ ಬಗ್ಗೆ ಕ್ರಮಕೈಗೊಳ್ಳಲಿ. @karave_KRV
8
75
347
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
ನಾವೀಗ ನಿರ್ಣಾಯಕ ಹೋರಾಟಕ್ಕೆ ತಯಾರಾಗಬೇಕಿದೆ. ತಮಿಳುನಾಡಿನ ಜನರಿಂದ ಸಾಧ್ಯವಾಗಿದ್ದು ನಮಗೇಕೆ ಸಾಧ್ಯವಿಲ್ಲ? ಕರ್ನಾಟಕಕ್ಕೆ ದ್ವಿಭಾಷಾ ನೀತಿ ಸಾಕು. ಸ್ವಾಭಿಮಾನವಿರುವ ಎಲ್ಲ ಕರ್ನಾಟಕದ ರಾಜಕಾರಣಿಗಳು ಧ್ವನಿ ಎತ್ತಬೇಕು. ಇದನ್ನು ಒಪ್ಪದವರನ್ನು ಕನ್ನಡಿಗರು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಬೇಕು. #ಹಿಂದಿಗುಲಾಮಗಿರಿಬೇಡ #No ‌ToHindiSlavery
15
170
341
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
#ಕನ್ನಡವಿವಿಉಳಿಸಿ ಟ್ವಿಟರ್ ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲ ಕನ್ನಡದ ಮನಸುಗಳಿಗೆ ಕೃತಜ್ಞತೆಗಳು. ನಾಳೆ ಕರವೇ ನಿಯೋಗದೊಂದಿಗೆ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಅವರನ್ನು ಭೇಟಿ ಮಾಡಿ ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲಿದ್ದೇನೆ. ಸರ್ಕಾರ ಕನ್ನಡ ವಿವಿಗೆ ಅಗತ್ಯ ಅನುದಾನ ನೀಡದಿದ್ದರೆ ���ೀದಿಹೋರಾಟ ಅನಿವಾರ್ಯ.
6
96
341
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಕನ್ನಡವನ್ನು ಎಲ್ಲಾ ಆಡಳಿತ ಹಂತಗಳಲ್ಲಿ ಅಧಿಕೃತ ಭಾಷೆಯನ್ನಾಗಿ ಅನುಷ್ಠಾನಗೊಳಿಸುವ "ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ"ವನ್ನು ಕರವೇ ಸ್ವಾಗತಿಸುತ್ತದೆ. ಈ ಮಹತ್ವದ ಕಾರ್ಯಕ್ಕೆ ಮುಂದಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಸುನಿಲ್ ಕುಮಾರ್ ಕಾರ್ಕಳ ಅವರನ್ನು ಅಭಿನಂದಿಸುತ್ತೇನೆ. (1/6)
6
82
347
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಒಂದು ವೇಳೆ ಪರಿಷತ್ತು ರಸ್ತೆಯ ಹೆಸರನ್ನು ಬದಲಿಸಲು ಹಟ ಹಿಡಿದಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಪ್ರತಿಭಟಿಸಬೇಕಾಗುತ್ತದೆ. ಕಸಾಪ ವಿರುದ್ಧವೇ ಹೋರಾಟ ನಡೆಸಲು ನಾವು ಹಿಂಜರಿಯುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಲು ಬಯಸುತ್ತೇನೆ. (5/5)
8
86
344
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
ಕನ್ನಡಿಗರು ಜಾತಿ, ಮತ, ಧರ್ಮ, ಪಂಥ, ಪಕ್ಷಗಳನ್ನು ಬದಿಗಿಟ್ಟು ಒಂದಾಗಬೇಕಾದ ಕಾಲವಿದು. ಈಗ ನಾವು ಮೈಮರೆತು ಕುಳಿತರೆ ನಮಗೆ ಉಳಿಗಾಲವಿಲ್ಲ. ಕನ್ನಡಿಗರೆಲ್ಲರೂ ಈ ದುಷ್ಟ ಹುನ್ನಾರಗಳ ವಿರುದ್ಧ ಹೋರಾಡೋಣ. ನಾವು ಹಿಂದಿ ಗುಲಾಮರಲ್ಲ‌ ಎಂದು ಸಾರೋಣ. ಹಿಂದಿ ಸಾಮ್ರಾಜ್ಯಶಾಹಿಯ ರಣಕೇಕೆಯನ್ನು ಹಿಮ್ಮೆಟ್ಟಿಸೋಣ. (5/5)
5
97
340
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
ಕರ್ನಾಟಕದಲ್ಲಿ ಕನ್ನಡದ ಜಾಗದಲ್ಲಿ ಹಿಂದಿಯನ್ನು ಸ್ಥಾಪಿಸುವ ಕುತಂತ್ರ ಹಿಂದಿ ಸಾಮ್ರಾಜ್ಯಶಾಹಿಯದು. ನಾವು ದಿಲ್ಲಿ ಗುಲಾಮರೂ ಅಲ್ಲ, ಹಿಂದಿ ಗುಲಾಮರೂ ಅಲ್ಲ. ನಾವು ಸ್ವಾಭಿಮಾನಿ ಕನ್ನಡಿಗರು. ಇವತ್ತಿನ ಟ್ವಿಟರ್ ಅಭಿಯಾನದಲ್ಲಿ ತಪ್ಪದೇ ಭಾಗವಹಿಸಿ. ಹುಸಿರಾಷ್ಟ್ರೀಯತೆಗೆ ಮಾರುಹೋಗಿ ತಾಯ್ನುಡಿಯ ಅಭಿಮಾನ ಕಳೆದುಕೊಂಡ ಕನ್ನಡಿಗರನ್ನು ಎಚ್ಚರಿಸೋಣ.
Tweet media one
7
132
330
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
ದೊಡ್ಡರಂಗೇಗೌಡರು ಹಿಂದಿಹೇರಿಕೆ ಪರವಾಗಿ ಮಾತನಾಡಲು ಏನು ಕಾರಣ ಎಂದು ಅವರೇ ಬಹಿರಂಗಪಡಿಸಲಿ. ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದಕ್ಕೆ ಋಣ ಸಂದಾಯ ಮಾಡುತ್ತಿದ್ದಾರೆಯೇ ಅಥವಾ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡುವ ಸಂದರ್ಭದಲ್ಲಿ ಹಿಂದಿಪರ ಮಾತಾಡಲು ಷರತ್ತು ವಿಧಿಸಲಾಗಿತ್ತೇ? (4/5)
5
83
334
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಶತಾಯುಷಿ ಎಚ್.ಎಸ್.ದೊರೆಸ್ವಾಮಿಯವರ ನಿಧನದಿಂದ ಗಾಂಧಿವಾದದ ಕೊಂಡಿ ಕಳಚಿಕೊಂಡಿದೆ. ಕೊನೆಯ ದಿನಗಳವರೆಗೆ ಅವರು ಸಮಾಜಕ್ಕೆ ಮಾರ್ಗದರ್ಶನ ಮಾಡಿದರು, ಜನಪರ ಚಳವಳಿಗಳಲ್ಲಿ ಪಾಲ್ಗೊಂಡರು, ಸರ್ಕಾರಗಳು ದಾರಿತಪ್ಪಿದಾಗ ಎಚ್ಚರಿಸುವ ಕೆಲಸ ಮಾಡಿದರು. ಸಾರ್ಥಕವಾಗಿ ಬದುಕಿದರು. ಈ‌ ಮಹಾನಾಯಕನಿಗೆ ಶ್ರದ್ಧಾಂಜಲಿಗಳು.
Tweet media one
7
37
336
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
ನಾವು ಎರಡೂವರೆ ಸಾವಿರ ವರ್ಷಗಳಿಂದ ಕನ್ನಡಿಗರು. ಭಾರತ ಒಕ್ಕೂಟದ ಭಾಗವಾಗಿ 74 ವರ್ಷಗಳಾಗಿವೆಯಷ್ಟೆ. ನಾವು ಮೊದಲೂ, ಈಗಲೂ, ಮುಂದೆಯೂ ಕನ್ನಡಿಗರು.‌ ಇನ್ನೂರು-ಮುನ್ನೂರು ವರ್ಷಗಳ ಭಾಷೆಯನ್ನು ತಂದು ನಮ್ಮ ಮೇಲೆ ಹೇರಬೇಡಿ. ನಿಮ್ಮ ಕುತಂತ್ರವನ್ನು ನಾವು ಬುಡಮೇಲು ಮಾಡುತ್ತೇವೆ. #ಹಿಂದಿಗುಲಾಮಗಿರಿಬೇಡ #No ‌ToHindiSlavery
10
170
325
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. #ಕನ್ನಡರಾಜ್ಯೋತ್ಸವ #Kannadarajyotsava
Tweet media one
4
34
324
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಗೋಕಾಕ್ ಚಳವಳಿ ಯಾಕೆ ನಡೆಯಿತೆಂಬುದನ್ನು ಒಮ್ಮೆ ನೆನಪಿಸಿಕೊಳ್ಳೋಣ. ಆಗಲೂ ಕೂಡಾ ಇದೇ ಸಂಸ್ಕೃತದ ಯಜಮಾನಿಕೆ ಮಾಡಲು ಬಯಸುವವರು ಕನ್ನಡದ ಬದಲು ಸಂಸ್ಕೃತ ಕಲಿಕೆಯ ಪಿತೂರಿ ನಡೆಸಿದ್ದರು. ಇಡೀ ರಾಜ್ಯವೇ ಆಗ ಒಂದಾಗಿ ಹೋರಾಡಿತ್ತು. ಈಗ ಅಂಥದ್ದೇ ಕಾಲ ಬಂದಿದೆ. #ಸಂಸ್ಕೃತವಿವಿಬೇಡ #SayNoToSanskrit
10
164
334
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
5 months
ನಮ್ಮ ಪ್ರತಿಭಟನೆ ಶಾಂತಿಯುತವಾಗಿಯೇ ನಡೆದಿದೆ. ಕಾರ್ಯಕರ್ತರ ಗುರಿ ಕೇವಲ ಕನ್ನಡೇತರ ನಾಮಫಲಕಗಳೇ ಆಗಿದ್ದವೇ ವಿನಃ ವ್ಯಕ್ತಿಗಳು, ಸಂಸ್ಥೆಗಳು ಆಗಿರಲಿಲ್ಲ. ಹೀಗಾಗಿ ಯಾವುದೇ ರೀತಿಯ ಹಿಂಸಾತ್ಮಕ ಚಳವಳಿ ನಾವು ನಡೆಸಿರುವುದಿಲ್ಲ. (4/8)
16
60
339
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
2 years
ಸಾಮಾಜಿಕ ಕ್ರಾಂತಿ, ಧಾರ್ಮಿಕ ಕ್ರಾಂತಿ, ಸಮತಾವಾದದ ಹರಿಕಾರ ವಿಶ್ವ ಗುರು ಬಸವಣ್ಣನವರಿಗೆ ಬೆಳಗಾವಿಯ ಜಿಲ್ಲೆಯ ಖಾನಾಪುರದ ಹಲಸಿಯಲ್ಲಿ ನೀಚ MES ಮತ್ತು ಶಿವಸೇನೆ ಭಯೋತ್ಪಾದಕರು ಮಸಿ ಬಳಿದು ಸಮಸ್ತ ಮಾನವ ಕುಲಕ್ಕೆ ಅವಮಾನ ಎಸೆಗಿದ್ದಾರೆ. ಈ ಕೃತ್ಯವನ್ನ ಎಲ್ಲ ಕನ್ನಡಿಗರು ಖಂಡಿಸಬೇಕು. ಇದನ್ನು ನಾವು ಯಾರೂ ಕ್ಷಮಿಸಲು ಸಾಧ್ಯವಿಲ್ಲ.
5
91
329
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
1 year
ಅಣ್ಣಾಮಲೈ ಅಪ್ಪಟ ಕನ್ನಡಿಗರು ವಾಸಿಸುವ ಬೆಂಗಳೂರಿನ‌ ಗೋವಿಂದರಾಜನಗರ ಕ್ಷೇತ್ರದಲ್ಲಿ ತಮಿಳಿನಲ್ಲಿ ಪ್ರಚಾರ ಭಾಷಣ ನಡೆಸಿದ್ದಾರೆ. ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷನಿಗೆ ಕರ್ನಾಟಕದಲ್ಲಿ ಏನು ಕೆಲಸ? ಈ ಕೀಳುಮಟ್ಟದ ಓಲೈಕೆ ರಾಜಕಾರಣದಿಂದ ಬಿಜೆಪಿಗೆ ನಷ್ಟವೇ ಹೊರತು ಲಾಭವಿಲ್ಲ ಎಂಬುದನ್ನು ಆ ಪಕ್ಷದವರು ಮನಗಾಣಬೇಕು. (5/6)
108
106
329
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
3 years
1.ಹಂಪಿ ಕನ್ನಡ ವಿಶ್ವವಿದ್ಯಾಲಯದ ಪರಿಸ್ಥಿತಿ ಶೋಚನೀಯವಾಗಿದೆ. ವಿಶ್ವವಿದ್ಯಾಲಯದಲ್ಲಿ ಎರಡು ವರ್ಷಗಳಿಂದ ಸಂಶೋಧನೆ, ಬೋಧನೆ ಹೆಚ್ಚು ಕಡಿಮೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರ ಪರಿಣಾಮವಾಗಿಯೇ ನ್ಯಾಕ್ ಗುಣಮಟ್ಟದಲ್ಲಿ ಎ+ ಇದ್ದ ಶ್ರೇಣಿ ಮೂರು ಮೆಟ್ಟಿಲು ಕೆಳಗಿಳಿದು ಬಿ ಶ್ರೇಣಿಗೆ ಇಳಿದಿದೆ. #ಕನ್ನಡವಿವಿಉಳಿಸಿ
7
137
319
@narayanagowdru
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
4 years
ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಕುರಿತಂತೆ ನನ್ನ ಪತ್ರಿಕಾ ಹೇಳಿಕೆ...
Tweet media one
10
76
319